ಗುಜರಾತ್ ಚುನಾವಣೆ 2017 : ಬಿಜೆಪಿ ಟಿಕೆಟ್ ಗಾಗಿ ಮುಸ್ಲಿಮರ ಪೈಪೋಟಿ | Oneindia Kannada

2017-11-04 1,155

Gujarat Assembly Elections 2017 : Muslims queue up for BJP tickets. BJP Minority Morcha has demanded several seats in the upcoming elections. Muslims leaders are seeking some "real sadbhavna" and hoping that BJP will field minority candidates for making greater inroads into the community.

ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟ್ ಗಿಟ್ಟಿಸಲು ಮುಸ್ಲಿಂ ಸಮುದಾಯದಿಂದ ಭಾರೀ ಡಿಮಾಂಡ್ ವ್ಯಕ್ತವಾಗುತ್ತಿದೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಅತಿಹೆಹ್ಚು ಮುಸ್ಲಿಮರು ಟಿಕೆಟಿಗಾಗಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ. 2011ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆಸಿದ್ದ ಸದ್ಭಾವನಾ ಯಾತ್ರೆಯ ನಂತರ ಬಿಜೆಪಿ ಟಿಕೆಟಿಗೆ ಭಾರೀ ಪೈಪೋಟಿ ವ್ಯಕ್ತವಾಗಿತ್ತು. ಆದರೆ, ನಿರೀಕ್ಷಿಸಿದಷ್ಟು ಮಟ್ಟಕ್ಕೆ ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ.ಸದ್ಭಾವನೆ ಎನ್ನುವುದನ್ನು ಕಾರ್ಯರೂಪಕ್ಕೂ ತನ್ನಿ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಮುಸ್ಲಿಂ ಪ್ರಾಭಲ್ಯವಿರುವ ಗುಜರಾತಿನ ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಮರಿಗೇ ಟಿಕೆಟ್ ನೀಡಬೇಕೆಂದು ಬಿಜೆಪಿ ಸಂಸದೀಯ ಮಂಡಳಿಯನ್ನು ಒತ್ತಾಯಿಸುತ್ತಿದೆ.2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿ ಟಿಕೆಟಿನಿಂದ ಗೆಲುವು ಸಾಧಿಸಿದ್ದರು. ಜಮ್ಲಾಪುರ, ಖಾಡಿಯಾ, ವೇಜಾಲ್ಪುರ, ವಾಗ್ರಾ, ಭುಜ್ ಮುಂತಾದ ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗೇ ಮನ್ನಣೆ ನೀಡಬೇಕೆಂದು ಅಲ್ಪಸಂಖ್ಯಾತ ಮೋರ್ಚಾ ಪಟ್ಟು ಹಿಡಿದಿದೆ ಎಂದು ಟೈಮ್ಸ್ ಆಪ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

Videos similaires